Sadvidya Educational Institutions

Anti Child labor Day

To create awareness on Child Labour and to give a real life situation experiece to our children to witness Children being employed in various sectors for low wages, Our students of 9th and 10th were taken to various places in Mysuru to conduct a survey.

Today, on 12th June, 2025 at Sadvidya Vijayanagar, we observed ‘Anti Child Labour Day’. Our students spread the message to one and all at school by creating awareness. Children displayed placards and charts prepared by them against child labour. Children also took an oath for the same.


ಬಾಲಕಾರ್ಮಿಕ ವಿರೋಧಿ ದಿನ

ಇಂದು, ಜೂನ್ 12, 2025 ರಂದು ಸದ್ವಿದ್ಯಾ ಶಾಲೆ ವಿಜಯನಗರದಲ್ಲಿ, ‘ಬಾಲಕಾರ್ಮಿಕ ವಿರೋಧಿ ದಿನ’ವನ್ನು ಆಚರಿಸಲಾಯಿತು. ನಮ್ಮ ವಿದ್ಯಾರ್ಥಿಗಳು ಬಾಲಕಾರ್ಮಿಕತೆಯ ವಿರುದ್ಧ ಜಾಗೃತಿ ಮೂಡಿಸುವ ಮೂಲಕ ಶಾಲೆಯಲ್ಲಿ ಸಂದೇಶವನ್ನು ಸಾರಿದರು ಮತ್ತು ಬಾಲಕಾರ್ಮಿಕರ ವಿರುದ್ಧ ತಾವು ಸಿದ್ಧಪಡಿಸಿದ ಫಲಕಗಳು ಮತ್ತು ಚಾರ್ಟ್‌ಗಳನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳು ಪ್ರತಿಜ್ಞೆ ಕೈಗೊಳ್ಳುವ ಮೂಲಕ ಬಾಲಕಾರ್ಮಿಕತೆಯ ನಿರ್ಮೂಲನೆಗಾಗಿ ತಾವು ಅರಿವು ಮೂಡಿಸುವ ಸಂಕಲ್ಪ ಕೈಗೊಂಡರು.

ಈದಿನವನ್ನು ವಿಶೇಷ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ, ಮಕ್ಕಳು ಬಾಲಕಾರ್ಮಿಕತೆಗೆ ಒಳಗಾಗದಂತೆ ಜಾಗೃತಿ ಮೂಡಿಸಲು ಮತ್ತು ಕಡಿಮೆ ವೇತನಕ್ಕೆ ವಿವಿಧ ವಲಯಗಳಲ್ಲಿ ಮಕ್ಕಳನ್ನು ಬಾಲ ಕಾರ್ಮಿಕರಾಗಿ ನೇಮಿಸಿಕೊಳ್ಳದಿರದಂತೆ ತಿಳುವಳಿಕೆ ನೀಡಲು ಹಾಗೂ ಅನೇಕ ವಲಯದಲ್ಲಿ ಬಾಲಾಕಾರ್ಮಿಕರಾಗಿ ನೇಮಕಗೊಂಡು ಶಾಲೆ ತೊರೆದಿರುವ ಮಕ್ಕಳಿಗೆ ವಿದ್ಯೆಯ ಮಹತ್ವ ಸಾರಲು ನಮ್ಮ ಶಾಲೆಯಿಂದ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳನ್ನು ಮೈಸೂರಿನ ವಿವಿಧ ಸ್ಥಳಗಳಿಗೆ ಸಮೀಕ್ಷೆ ನಡೆಸಲು ಕರೆದೊಯ್ಯಲಾಯಿತು.

Scroll to Top